Thursday, November 13, 2014

ಚಿಂತ್ಯಾಕೆ ಮಾಡುತಿದ್ದಿ (Chintyake maadutiddi) - ಪುರಂದರ ದಾಸರು

A Song that I have loved since my childhood. I first came across this in vividbharati radio early in the morning. It has always made my mornings a little more pleasant.

(ಪ್ರಾಣಿ) ಚಿಂತ್ಯಾಕೆ ಮಾಡುತಿದ್ದಿ ಚಿನ್ಮಯನಿದ್ದಾನೆ,
ಚಿಂತಾರತ್ನವೆಂಬೊ ಅನಂತನಿದ್ದಾನೇ ।

ಎಳ್ಲುಮೊನೆಯಾ ಮುಳ್ಳು ಕೊನೆಯಾ, ಹೊಳ್ಳು ಬಿಡದೆ ಒಳಗೆ ಹೊರಗೆ,
ಎಲ್ಲ ಠಾವಿನಲ್ಲಿಲಕುಮಿನಲ್ಲನಿದ್ದಾನೇ ।

ಹಿಂದೆ ನಿನ್ನಾ ಸಲಹಿದರ್ ಯಾರೋ, ಮುಂದೆ ನಿನ್ನ ಪೊಲುವವರ್ ಯಾರೋ,
ಅಂದಿಗಿಂದಿಗೆಂದಿಗೂ ಗೋವಿಂದ ನಿದ್ದಾನೇ ।

ಗೋಪ್ತಾ ತ್ರಿಜಗದ್ ವ್ಯಾಪ್ತಾ ಭಜಕರ ಆಪ್ತನೆನಿಸಿ ಸ್ತಂಭದಲ್ಲಿ,
ಪ್ರಾಪ್ತನಾದ ಪ್ರಹ್ಲಾದನ ಪರಮಾಪ್ತ ನಿದ್ದಾನೇ ।

ಮುಕ್ಕಣ್ಣ ದೇವರ್ಕಳಿಗೇ ಸಿಕ್ಕಿದ್ದ ಸೆರೆಯನ್ನು ಬಿಡಿಸಿ,
ಚಿಕ್ಕವರಿಗೆ ಅಚಲ ಪದವಿಯ ದಕ್ಕಿಸಿದ್ದಾನೇ ।

ನಾನು ನನ್ನದುಯೆಂಬುದ ಬಿಟ್ಟು ಹೀನವಿಷಯಂಗಳನು ಜರಿದು,
ಜ್ಞಾನಗಮ್ಯ ಕಾಯೋಯೆನಲು ಪೂರ್ಣನಿದ್ದಾನೇ ।

ಸುತ್ತ ಬಂದ ದುರಿತಗಳನು ಕತ್ತರಿಸಿ ಕಡಿದಾಕೊವಂಥ,
ಹೆತ್ತ ತಾಯಿ ತಂದೆ ತವರೂ ಹತ್ತಿರಿದ್ದಾನೇ ।

ಬಲ್ಲಿದ ಭಜಕರ ಹೃದಯದಿ ಮುದ್ದು ಪುರಂದರವಿಠಲ ನಿಂತು,
ಸೊಲ್ಲು ಸೊಲ್ಲಿಗವರ ಬಯಕೆ ಸಲ್ಲಿಸುತಿದ್ದಾನೇ ।


Thursday, October 09, 2014

ನಿನ್ನ ಒಲುಮೆಯಿಂದ - ವಿಜಯ ದಾಸರು

ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು ಮನ್ನಿಸುವರೋ ಮಹರಾಯ ।
ಎನ್ನ ಪುಣ್ಯಗಲಿಂದ ಈ ಪರಿಯುಂಟೆನೊ ನಿನ್ನದೇ ಸಕಲ ಸಂಪತ್ತು ।।

ಜೀರ್ಣ ಮಲಿನ ವಸ್ತ್ರ ಕಾಣದ ಮನುಜಗೆ ಪೂರ್ಣವಿಚಿತ್ರ ಸುವಾಸನ ।
ವರ್ಣ ವರ್ಣದಿಂದ ಬಾಹೋದೇನೊ ಸಂಪೂರ್ಣ ಗುಣಾರ್ಣವ ದೇವಾ ।।

ಒಬ್ಬ ಹೆಂಗಸಿನ ಹೊಟ್ಟೆಗೆ ಹಾಕುವುದಕ್ಕೆ ತಬ್ಬಿಬ್ಬುಗೊಂಡೆನೊ ಹಿಂದೆ ।
ನಿರ್ಭರದಿಂದಲಿ ಸರ್ವರ ಕೂಡುಂಬೊ ಹಬ್ಬದೂಟವ ಉಣ್ಣಿಸುವೆಯೋ ।।

ಸಂಜಿ ತನಕ ಇದ್ದು ಸಣ್ಣ ಸೌಟಿನ ತುಂಬ ಗಂಜಿ ಕಾಣದೆ ಬಳಲಿದೆನೋ ।
ವ್ಯಂಜನ ಮೊದಲಾದ ನಾನ ರಸಂಗಳ ಭುಜಿಸುವುದು ಮತ್ತೇನೋ ।।

ಮನೆ ಮನೆ ತಿರುಗಿದರು ಕಾಸು ಪುಟ್ಟದೆ ಸುಮ್ಮನೆ ಚಾಲವರಿದು ಬಳಲಿದೆನೋ ।
ಹಣ ಹೊನ್ನು ದ್ರವ್ಯಗಳಿದ್ದಲ್ಲಿಗೆ ತಾನಾಗೆ ತಾತ ಪ್ರಾಪ್ತಿ ನೊಡೋ ಜೀಯಾ ।।

ಮಧ್ಯಾನ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ ಮೆದ್ದೆನೆಂದರೆ ಈಯಗಾವ ।
ಈ ಧರೆಯೊಳಗೆ ಸತ್ಪಾತ್ರರ ಕೂಡುಂಬೊ ಪದ್ಧತಿ ನೋಡೋ ಪುಣ್ಯಾತ್ಮ ।।

ನೀಚೊಚ್ಛ ತಿಳಿಯದೆ ಸರ್ವರ ಚರಣಕ್ಕೆ ಚಾಚಿದೆನೋಸಲ ಹಸ್ತಗಳ ।
ಯೋಚಿಸಿ ನೋಡಲು ಸೋಜಿಗವಾಗಿದೆ ವಾಚಕ್ಕೆ ನಿಲಿಕದೋ ಹರಿಯೇ ।।

ವೈದಿಕ ಪದವೀವಗೀಬಗೆ  ಲೌಕಿಕ ವೈದಿಸುವದು ಬಲು ಕ್ಯಾತೆ ।
ಮೈದುನಗೋಲಿದ ಶ್ರೀ ವಿಜಯವಿಟ್ಠಲ ನಿನ್ನ ಪಾದಸಾಕ್ಷಿಯ ಅನುಭವವೋ ।।